ಚಿಕ್ಕಮಗಳೂರು– ಚಿಕ್ಕಮಗಳೂರು ಟೌನ್ ಕೋ ಆಪರೇಟಿವ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ಸಿ.ಎಸ್.ವರಸಿದ್ದಿ ವೇಣುಗೋಪಾಲ್ ಹಾಗೂ ಉಪಾಧ್ಯಕ್ಷರಾಗಿ ಎಂ.ಎಂ.ಹಾಲಮ್ಮ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಬರ್ಯಾವ ಉಮೇದುವಾರಿಕೆ ಸಲ್ಲಿಕೆಯಾಗದ ಹಿನ್ನೆಲೆ ಚುನಾವಣಾಧಿಕಾರಿ ಮಹಾಂತೇಶ್ ವರಸಿದ್ದಿ ವೇಣುಗೋಪಾಲ್ ಹಾಗೂ ಹಾಲಮ್ಮ ಅವರನ್ನು ಕಚೇರಿ ಸಭಾಂಗಣದಲ್ಲಿ ಅಧಿಕೃತ ವಾಗಿ ಘೋಷಿಸಿದರು.
ಬಳಿಕ ಮಾತನಾಡಿದ ನೂತನ ಅಧ್ಯಕ್ಷ ಸಿ.ಎಸ್.ವರಸಿದ್ದಿ ವೇಣುಗೋಪಾಲ್ ಮುಂದಿನ ದಿನಗಳಲ್ಲಿ ಸೊಸೈಟಿ ಸಾರ್ವಜನಿಕ ಹಾಗೂ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವ ಜೊತೆಗೆ ಹೆಚ್ಚಿನ ಮೊತ್ತದಲ್ಲಿ ಸೊ ಸೈಟಿ ಸದಸ್ಯರುಗಳಿಗೆ ಸಾಲ ವಿತರಿಸಿ ಸಂಘದ ಬೆಳವಣಿಗೆಗೆ ಏಳಿಗೆಗೆ ದುಡಿಯುತ್ತೇನೆ ಎಂದರು.
ಕಳೆದ ನಗರಸಭಾ ಅಧ್ಯಕ್ಷನಾಗಿ ನಗರವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ದ, ಮಾದರಿಯಲ್ಲೇ ಸೊ ಸೈಟಿಯನ್ನು ಅಭಿವೃದ್ದಿಪಡಿಸುತ್ತೇನೆ. ಜೊತೆಗೆ ಸಂಘದಲ್ಲಿ ಹಿಂದಿನ ಸಾಲ ಪಡೆದುಕೊಂಡ ಸದಸ್ಯರಿಗೆ ಮನ ವೊಲಿಸುವ ಮುಖೇನ ಸಾಲ ಮರುಪಾವತಿಗೆ ಕ್ರಮ ವಹಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಸೊಸೈಟಿ ನಿರ್ದೇಶಕರುಗಳಾದ ಸಿ.ವಿ.ಕುಮಾರ್, ಎಂ.ಶ್ರೀನಿವಾಸ್, ಸಿ.ಆರ್.ಕೇಶವ ಮೂರ್ತಿ, ಬಿ.ಎನ್.ರಾಜಣ್ಣಶೆಟ್ಟಿ, ಸಿ.ಆರ್.ಗಂಗಾಧರ್, ಬಿ.ಎಸ್.ಪ್ರಶಾಂತ್, ಸಿ.ಡಿ.ರಘು, ಎನ್.ಈಶ್ವರಪ್ಪ, ಅಂಬಿಕಾ, ಡಿ.ಜಯಂತಿ, ಕೆ.ಪರಮೇಶ್ವರ್, ಕಾರ್ಯದರ್ಶಿ ಗಾಯತ್ರಿ ಹಾಗೂ ವಿವಿಧ ಪಕ್ಷದ ಹಾಗೂ ಪ್ರಗತಿ ಪರ ಸಂಘಟನೆ ಮುಖಂಡರುಗಳು ಹಾಜರಿದ್ದರು.
- ಸುರೇಶ್ ಎನ್.