ಚಿಕ್ಕಮಗಳೂರು:- ಅಂಗನವಾಡಿ ಕೇಂದ್ರದ ಹೊಸ ಕಟ್ಟಡ ನಿರ್ಮಾಣಕ್ಕೆ ಮೀಸಲಿಟ್ಟಿ ರುವ ಅನುದಾನವನ್ನು ಬೇರೆಡೆ ವರ್ಗಾಯಿಸಬಾರದು ಎಂದು ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಮತ್ತು ಗ್ರಾಮಸ್ಥರು ಕೆಳಗೂರು ಗ್ರಾಮ ಪಂಚಾಯಿತಿಗೆ ಸೋಮವಾರ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಮಿತಿ ಅಧ್ಯಕ್ಷೆ ದೇವಕಿ ಆಲ್ದೂರು ಹೋಬಳಿಯ ಹಾಂದಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಹೊಸ ಕಟ್ಟಡ ನಿರ್ಮಿಸಲು ಸರ್ಕಾರದಿಂದ 2023-24ನೇ ಸಾಲಿನಲ್ಲಿ 20 ಲಕ್ಷ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಹೊಸ ಕಟ್ಟಡ ನಿರ್ಮಾಣದ ಸಂಬಂಧ ಹಲವು ಅಡೆ-ತಡೆಗಳಿರುವ ಕಾರಣ ಇದುವರೆಗೂ ಖಾತೆಗೆ ಅನುದಾನ ಜಮೆಯಾಗಿಲ್ಲ. ಈ ಹಿಂದೆ ಪಂಚಾಯಿತಿ ಕಟ್ಟೆ ಸಭೆಯಲ್ಲಿ ಗ್ರಾಮಸ್ಥರು, ಸಮಿತಿ ಪದಾಧಿಕಾರಿ ಗಳು ಕಟ್ಟಡ ನಿರ್ಮಾಣಕ್ಕೆ ಶೀಘ್ರವೇ ಕಾರ್ಯಗತಗೊಳಿಸಬೇಕು ಎಂದು ಮನವಿ ಸಲ್ಲಿಸಲಾಗಿತ್ತು ಎಂದರು.
ಪ್ರಸ್ತುತ ಅಂಗನವಾಡಿ ಕೇಂದ್ರದಲ್ಲಿ ಪರಿಶಿಷ್ಟರ 3 ರಿಂದ 6 ವರ್ಷದ 25 ಮಕ್ಕಳು, 6 ತಿಂಗಳಿನಿಂದ 3 ವರ್ಷದ 15 ಮಕ್ಕಳ ಸಂಖ್ಯೆಯಿದೆ. ಗರ್ಭಿಣಿ ಮತ್ತು ಬಾಣಂತಿಯರು 15 ಕ್ಕೂ ಹೆಚ್ಚು ಫಲಾನುಭವಿಗಳಿ ದ್ದಾರೆ. ಈ ಕೇಂದ್ರವು 3೦ ವರ್ಷಗಳ ಹಳೇ ಕಟ್ಟಡವಾಗಿದ್ದು ವಿಪರೀತ ಮಳೆಯಿಂದ ಸಂಪೂರ್ಣ ಶಿಥಿಲೀ ಕರಣಗೊಂಡಿದೆ ಎಂದರು.

ಹೊಸದಾಗಿ ಅಂಗನವಾಡಿ ಕೇಂದ್ರದ ನಿರ್ಮಿಸಲು ಶೀಘ್ರವೇ ಸರ್ಕಾರದ ವತಿಯಿಂದ ದಾಖಲಾತಿಗಳ ನ್ನು ಒದಗಿಸುವುದರ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ದಸಂಸ ಮುಖಂಡ ಸೋಮಣ್ಣ ಮಾತನಾಡಿ ಈ ಹಿಂದೆ ಹಾಂದಿಯ ಪಂಚಾಯಿತಿ ಕಟ್ಟೆ ಸಭೆಯಲ್ಲಿ ಗ್ರಾಮಸ್ಥರು ಮನವಿ ಸಲ್ಲಿಸಿ ೧೫ ದಿನಗಳ ಗಡುವು ನೀಡಲಾಗಿದ್ದು, ಹೊಸ ಕಟ್ಟಡಕ್ಕೆ ಶೀಘ್ರವೇ ಅನುಮತಿ ನೀ ಡಿ ಕಾಮಗಾರಿ ಪ್ರಾರಂಭಿಸಲು ಸೂಚಿಸದಿದ್ದಲ್ಲಿ ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಲತಾ, ಲಕ್ಷ್ಮಣ್ , ವಿನುತ, ಅಂಗನವಾಡಿ ಶಿಕ್ಷಕಿ ಮೈನಾ, ಗ್ರಾಮಸ್ಥರಾದ ದೇವರಾಜ್, ದಿನೇಶ್, ರಾಧಾ, ಮಂಜುನಾಥ್, ಶರವಣ, ಲಕ್ಷ್ಮಮ್ಮ, ಜಾನಕಿ, ವನಜಾಕ್ಷಿ, ಕುಮಾರ್, ಈರಯ್ಯ, ನಿಶಾಂತ, ಪುಟ್ಟಸ್ವಾಮಿ, ಸಿಂಚನ, ಸರೋಜ, ಗೀತಾ, ಮಲ್ಲೇಶ್, ಸಾರ್, ಕಿರಣ್ ಕೃಷ್ಣ, ಶಿವು, ವಸಂತ್, ಆಶಾ ಕಾರ್ಯಕರ್ತೆಯರು ಮತ್ತಿತರರಿದ್ದರು.
-ಸುರೇಶ್ ಎನ್.