ಬಣಕಲ್ : ಮೂಡಿಗೆರೆಯಿಂದ ಬಣಕಲ್ ಗೆ ತೆರಳುವ ಮಾರ್ಗ ಮದ್ಯೆ ರಾ. ಹೆ 73ರ ಬಣಕಲ್ ಗ್ರಾಮದ ರಸ್ತೆಯ ಪಕ್ಕದಲ್ಲಿ ಸುಮಾರು ಅರ್ಧ ಎಕರೆ ಜಾಗದಲ್ಲಿ ರಾಜ್‌ಸ್ಟೋನ್ ಕ್ರಷರ್ ಗೆ ಸೇರಿದ ಕಂಪನಿಯವರು ಮರಳು ಜೆಲ್ಲಿಕಲ್ಲು, ಸಿಮೆಂಟ್ ಇನ್ನಿತರ ಕಚ್ಚಾವಸ್ತುಗಳನ್ನು ರಸ್ತೆ ಪಕ್ಕದಲ್ಲೇ ದಾಸ್ತಾನು ಮಾಡಿದ್ದು ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಹಾಗೂ ವಾಹನ ಸವಾರರಿಗೆ ಸಂಚಾರ ಮಾಡಲು ತೀವ್ರ ಸ್ವರೂಪದ ತೊಂದರೆ ಉಂಟಾಗುತ್ತಿದೆ ಕಂಪನಿಯವರು ಇದರ ಬಗ್ಗೆ ಯಾವುದೇ ಮುಂಜಾಗ್ರತೆ ಕ್ರಮ ಗಳನ್ನು ಕೈಗೊಂಡಿರುವುದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸಾರ್ವಜನಿಕರ ಅನುಕೂಲಕ್ಕಾಗಿ ಸದರಿ ಸ್ಥಳದಲ್ಲಿ ದಾಸ್ತಾನು ಆಗಿರುವ ವಸ್ತುಗಳನ್ನು ಈಗಲೇ ತೆರವುಗೊಳಿಸಬೇಕು ಎಂದು ಬಣಕಲ್ ಪಲ್ಗುಣಿ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.
- ಸೂರಿ,ಬಣಕಲ್