ಕೊರಟಗೆರೆ :- ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ, ಜಿಲ್ಲಾ ಘಟಕ ಮಧುಗಿರಿ, ತಾಲೂಕು ಘಟಕ ಕೊರಟಗೆರೆ ಶಾಖೆವತಿಯಿಂದ ಮಹಿಳಾ ದಿನಾಚರಣೆಯ ಪ್ರಯುಕ್ತ ಸಂಘದ ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳು ತುಮಕೂರು ಜಿಲ್ಲೆಯ ಮೈದಾಳದ ಬಳಿ ಇರುವ ಶ್ರೀ ಶಿವ ಆಶ್ರಮಕ್ಕೆ ಭೇಟಿ ನೀಡಿ ಅಲ್ಲೇ ಇರುವ ಎಲ್ಲಾ ಅನಾಥ ಮಕ್ಕಳಿಗೆ ಹಾಗೂ ವೃದ್ಧಾಶ್ರಮದಲ್ಲಿರುವ ವೃದ್ಧರಿಗೆ ಒಂದು ದಿನದ ಊಟದ ವ್ಯವಸ್ಥೆಯನ್ನು ಸಂಘದ ಕಡೆಯಿಂದ ಮಾಡಲಾಯಿತು.
ಶ್ರೀ ಶಿವ ಆಶ್ರಮದ ಮುಖ್ಯಸ್ಥರಾದ ಶ್ರೀಯುತ ಲೇಪಾಕ್ಷಯ್ಯ ರವರು ಮಾತನಾಡಿ ಸಾವಿತ್ರಿ ಬಾಯಿ ಪುಲೆ ಸಂಘವು ಉತ್ತಮವಾದ ಕಾರ್ಯವನ್ನು ಮಾಡುತ್ತಿದ್ದು ಇದೇ ರೀತಿ ಅನೇಕ ಕಾರ್ಯಕ್ರಮಗಳನ್ನು ಮಾಡಲಿ ಎಂದು ಪ್ರಶಂಶಿಸಿದರು.

ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ರಾಧಮ್ಮ ರವರು ಮಾತನಾಡಿ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರ ಅಧ್ಯಕ್ಷರಾದ ಡಾ.ಲತಾ ಎಸ್ ಮುಳ್ಳೂರ ಅವರ ಶ್ರಮದಿಂದ ಸಂಘಟನೆಯು ಹೆಮ್ಮರವಾಗಿ ಬೆಳೆದಿದೆ. ಸಾವಿತ್ರಿಬಾಯಿ ಪುಲೆ ಅವರು ಶಿಕ್ಷಣಕ್ಕಾಗಿ ನೀಡಿದ ಮಹತ್ವವನ್ನು ಹಾಗೂ ತಾವು ಶಿಕ್ಷಣ ಪಡೆಯಲು ಅನುಭವಿಸಿದ ಕಷ್ಟ ಕಾರ್ಪಣ್ಯಗಳನ್ನು ವಿವರಿಸುತ್ತ ಎಲ್ಲಾ ಹೆಣ್ಣು ಮಕ್ಕಳು ಎಲ್ಲಾ ವೃತ್ತಿಗಳನ್ನುಗಳನ್ನು ನಿಭಾಯಿಸುವಂತಹ ಶಕ್ತಿ ಹೊಂದಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷರಾದ ಶ್ರೀಮತಿ ಸುಜಾತ ಕಾರ್ಯದರ್ಶಿಗಳಾದ ಆಶಾ ರಾಣಿ ಪದಾಧಿಕಾರಿಗಳಾದ ಸುನಂದಮ್ಮ ಹೆಚ್ ಆರ್, ಪುಷ್ಪಲತಾ ಟಿ ಆರ್, ಕಲ್ಯಾಣಮ್ಮ,ಸುಜಾತ,ರೂಪ ಎನ್, ವಿಶಾಲಾಕ್ಷಿ,ಮಂಜುಳಾ, ರಮಾ, ರಂಗಮ್ಮ,ಸರೋಜಮ್ಮ ,ಸುಜಾತ ಸಂಘದ ಇತರೆ ಸದಸ್ಯರು ಭಾಗವಹಿಸಿದ್ದರು.
– ಶ್ರೀನಿವಾಸ್ ಕೊರಟಗೆರೆ