ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲೂ “ಮೈ ಹೀರೋ”ಗೆ ಪ್ರಶಂಸೆ ಹಾಗೂ ಪ್ರಶಸ್ತಿಯ ಸುರಿಮಳೆ .

ಎ.ವಿ .ಸ್ಟುಡಿಯೋಸ್ ಲಾಂಛನದಲ್ಲಿ ಅವಿನಾಶ್ ವಿಜಯಕುಮಾರ್ ನಿರ್ಮಿಸಿ, ನಿರ್ದೇಶಿಸಿರುವ “ಮೈ ಹೀರೊ” ಚಿತ್ರ ಕಳೆದ ಆಗಸ್ಟ್ ನಲ್ಲಿ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಷ್ಟೇ ಅಲ್ಲದೇ ಪ್ರಪಂಚದ ಪ್ರಸಿದ್ದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲೂ “ಮೈ ಹೀರೋ” ಚಿತ್ರ ಪ್ರದರ್ಶನವಾಗಿದೆ. ಚಿತ್ರಕ್ಕೆ ಈವರೆಗೂ ಪ್ರದರ್ಶನವಾಗಿರುವ ಎಲ್ಲಾ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲೂ ಪ್ರಶಂಸೆಯ ಜೊತೆಗೆ ಪ್ರಶಸ್ತಿ ಕೂಡ ದೊರಕಿರುವುದು ಚಿತ್ರತಂಡದವರಲ್ಲಿ ಸಂತಸ ಮನ ಮಾಡಿದೆ.

“ಟೋಕಿಯೋ ಇಂಟರ್ನ್ಯಾಷನಲ್ ಸಿನಿಮಾ ಅವಾರ್ಡ್ಸ್ 2024”, “ಸ್ಯಾನ್ ಡಿಯ್ಗೊ ಇಂಡಿಪೆಂಡೆಂಟ್ ಸಿನಿಮಾ ಅವಾರ್ಡ್ಸ್”(ಇಂಡಿಯನ್ ಸಿನಿಮಾ), ” “MIAFF” 2024 (ಬೆಸ್ಟ್ ನರೇಟಿವ್ ಫ್ಯೂಚರ್ ಫಿಲ್ಮ್ ಹಾಗೂ ಬೆಸ್ಟ್ ಡೈರೆಕ್ಟರ್),‌ “ನ್ಯೂಯಾರ್ಕ್ ಫಿಲಂ & ಸಿನಿಮೆಟೊಗ್ರಾಫಿ ಅವಾರ್ಡ್ 2024”, “ಸ್ವಿಡನ್ ಫಿಲಂ ಅವಾರ್ಡ್ಸ್” ನಲ್ಲಿ ಬೆಸ್ಟ್ ಫ್ಯೂಚರ್ ಫಿಲಂ, “ಬ್ಯಾಂಗ್ ಕಾಕ್ ಮೂವೀ ಅವಾರ್ಡ್ಸ್‌ನಲ್ಲಿ” ನಿರ್ದೇಶಕರಿಗೆ ಬೆಸ್ಟ್ ಮೂವೀ‌ ಮೇಕರ್‌ ಹಾಗೂ “ವೆಸ್ಟರ್ನ್ ಕೆನಡಿಯನ್ ಇಂಟರ್ನ್ಯಾಷನಲ್ ಅವಾರ್ಡ್ಸ್” ನಲ್ಲಿ ಉತ್ತಮ ಚಿತ್ರ ಹಾಗೂ ಉತ್ತಮ‌ ನಿರ್ದೇಶಕ ಪ್ರಶಸ್ತಿ ದೊರಕಿದೆ.

ಈ ಮೇಲ್ಕಂಡ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಮಾತ್ರವಲ್ಲದೇ ಮುಂದೆ ಕೂಡ ಪ್ರಪಂಚದ ಹೆಸರಾಂತ ಚಲನಚಿತ್ರೋತ್ಸವಗಳಲ್ಲಿ ನಮ್ಮ ಚಿತ್ರ ಪ್ರದರ್ಶನವಾಗಲಿದೆ. ನಮ್ಮ ಚಿತ್ರದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ಎನ್ನುತ್ತಾರೆ ನಿರ್ಮಾಪಕ & ನಿರ್ದೇಶಕ ಅವಿನಾಶ್ ವಿಜಯಕುಮಾರ್.

ಹಾಲಿವುಡ್ ನಟ ಜಿಲಾಲಿ ರೆಜ್ ಕಲ್ಲಾಹ್ ಹಾಗೂ ಬಾಲನಟ ವೇದಿಕ್ ಕೌಶಿಕ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ದತ್ತಣ್ಣ, ಪ್ರಕಾಶ್ ಬೆಳವಾಡಿ, ಎರಿಕ್ ರಾಬರ್ಟ, ನಿರಂಜನ್ ದೇಶಪಾಂಡೆ, ಅಂಕಿತ ಅಮರ್, ತನುಜಾ ಕೃಷ್ಣಪ್ಪ, ನವೀನ್ ಬೊಂದೇಲ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಗಗನ್ ಬಡೇರಿಯಾ ಸಂಗೀತ ನಿರ್ದೇಶನ ಹಾಗೂ ವೀನಸ್ ನಾಗರಾಜ್ ಅವರ ಛಾಯಾಗ್ರಹಣ “ಮೈ ಹೀರೊ” ಚತ್ರಕ್ಕಿದ್ದು, ಅವಿನಾಶ್ ವಿಜಯಕುಮಾರ್ ಅವರೆ ಸಂಭಾಷಣೆ ಬರೆದಿದ್ದಾರೆ.

Leave a Reply

Your email address will not be published. Required fields are marked *

× How can I help you?