ಅರಕಲಗೂಡು:ಪಟ್ಟಣ ಪಂಚಾಯತಿಯ ಅಧ್ಯಕ್ಷ ಸ್ಥಾನಕ್ಕಾಗಿ ವಿವಿಧ ಪಕ್ಷದ ಆಕಾಂಕ್ಷಿಗಳಿಂದ ದೊಡ್ಡ ಮಟ್ಟದ ಕಸರತ್ತು ನಡೆಯುತ್ತಿದೆ.ಬಿಜೆಪಿ ಹಾಗು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ರಮೇಶ್ ವಾಟಾಳ್ ರನ್ನು ಆಯ್ಕೆ ಮಾಡಲಾಗಿದ್ದು ಗೆಲುವು ಪಡೆಯಲು ಮೈತ್ರಿ ಮುಖಂಡರು ಪಟ್ಟುಗಳನ್ನು ಹಾಕುತ್ತಿದ್ದಾರೆ.
ಈಗಾಗಲೇ ಬಿಜೆಪಿಯ ಜಿಲ್ಲಾ ಅಧ್ಯಕ್ಷರಾದ ಸಿ ಎಲ್ ನಾಗೇಂದ್ರ ರವರು ಪಕ್ಷದ ಸದಸ್ಯರುಗಳಿಗೆ ವಿಪ್ ಜಾರಿ ಮಾಡುತ್ತಿದ್ದು ಕೈಗೆ ಸಿಗದ ಸದಸ್ಯರುಗಳ ಮನೆಯ ಗೋಡೆಗಳಿಗೆ ವಿಪ್ ಪ್ರತಿಯನ್ನು ಅಂಟಿಸಿ ಬರುವ ಕೆಲಸ ಮಾಡುತ್ತಿದ್ದಾರೆ.ಬಿಜೆಪಿ ಹಾಗು ಜೆಡಿಎಸ್ ಪಕ್ಷದ ಸದಸ್ಯರುಗಳು ಎರಡು ಗುಂಪುಗಳನ್ನು ಮಾಡಿಕೊಂಡು ಅಜ್ಞಾತ ಸ್ಥಳಕ್ಕೆ ಪ್ರವಾಸ ಹೋಗಿದ್ದು ಅವರನ್ನು ಹಿಡಿದು ಮಾತುಕತೆ ನಡೆಸಲು ಎರಡೂ ಪಕ್ಷದ ಮುಖಂಡರುಗಳು ಹರಸಾಹಸ ನಡೆಸುತ್ತಿದ್ದಾರೆ.
ಅತ್ಯಂತ ಸಜ್ಜನ ಸಮಾಜಮುಖಿ ನಿಲುವಿನ ರಮೇಶ್ ವಾಟಾಳ್ ರವರಿಗೆ ಈ ಬಾರಿ ಮೈತ್ರಿ ಪಕ್ಷದ ಸದಸ್ಯರುಗಳು ಮತ ನೀಡಿ ಅಧ್ಯಕ್ಷರಾಗಲು ಸಹಕರಿಸುತ್ತಾರಾ? ಅಥವಾ ‘ಕೈ’ ಹಿಡಿದು ವಿವಿಧ ಆಸೆಗಳಿಗೆ ಬಲಿಯಾಗುತ್ತಾರ? ಕಾದು ನೋಡಬೇಕಾಗಿದೆ.
———————————–ಶಶಿಕುಮಾರ್ ಕೆಲ್ಲೂರು