ಎಚ್‌.ಡಿ.ಕೋಟೆ-ಮೃತ ಮಹಿಳೆಯ ‘ಶವ ಪರೀಕ್ಷೆ’ಗೂ ‘ವಿಳಂಬ’ ತೋರಿದ ಸರಕಾರಿ ಆಸ್ಪತ್ರೆ-ತೀವ್ರ ಜನಾಕ್ರೋಶ

ಎಚ್‌.ಡಿ.ಕೋಟೆ:ಹೆರಿಗೆಗಾಗಿ ತಾಲೂಕಿನ ಸರಕಾರಿ ಆಸ್ಪತ್ರೆಗೆ ಬಂದಿದ್ದ ಮಹಿಳೆ ಮೃತಪಟ್ಟಿದ್ದು ಶವಪರೀಕ್ಷೆ ನಡೆಸಲು ವೈದ್ಯರು ನಿರ್ಲಕ್ಷ್ಯ ತೋರಿದ ಘಟನೆ ವರದಿಯಾಗಿದೆ.

ಒಂಬತ್ತು ತಿಂಗಳ ಗರ್ಭಿಣಿ ಗೀತಳನ್ನು ಹೆರಿಗೆಗಾಗಿ ಇಂದು ಬೆಳಗ್ಗೆ ೫-೩೦ ಜಾವಕ್ಕೆ ಆಸ್ಪತ್ರೆಗೆ ಸೇರಿಸಲಾಗಿತ್ತು. ದುರದೃಷ್ಟವಶಾತ್ ಮಹಿಳೆ ಮೃತಪಟ್ಟಿದ್ದು ಶವವನ್ನು ಮದ್ಯಾನ್ನ ಎರಡು ಗಂಟೆಯವರೆಗೂ ಆಸ್ಪತ್ರೆಯಲ್ಲೇ ಇಟ್ಟುಕೊಂಡ ವೈದ್ಯರ ತಂಡ ಪರೀಕ್ಷೆ ನಡೆಸದೆ ಇದ್ದದ್ದು ಸಂಬಂದಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.ಸಂಬಂದಿಕರು ವೈದ್ಯರ ವಿರುದ್ಧ ಪ್ರತಿಭಟನೆ ನಡೆಸಿದರು.

ಈ ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಶ್ರೀನಿವಾಸ್ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸೋಮಣ್ಣ ರವರನ್ನು ತರಾಟೆಗೆ ತೆಗೆದುಕೊಂಡರು.ತಕ್ಷಣ ಕಾರ್ಯಪ್ರವೃತ್ತರಾದ ವೈದ್ಯರು ಕೊನೆಗೂ ಶವಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಿದರು.

ಹಲವಾರು ಬಾರಿ ದೂರು …

ಈ ಹಿಂದೆಯೂ ಆಸ್ಪತ್ರೆಯಲ್ಲಿ ಇಂಥದ್ದೇ ಹಲವಾರು ನಿರ್ಲಕ್ಷ್ಯ ಪ್ರಕರಣಗಳು ನಡೆದು ಗೊಂದಲಗಳು ಏರ್ಪಟ್ಟಿದ್ದವು. ಶಾಸಕ ಅನಿಲ್ ಚಿಕ್ಕಮಾದುರವರೆಗೂ ಸಾರ್ವಜನಿಕರು ಹತ್ತಾರು ಬಾರಿ ದೂರುಗಳನ್ನು ಒಯ್ದರು ಯಾವುದೇ ಪ್ರಯೋಜನಗಳಾಗಿಲ್ಲ ಎನ್ನಲಾಗುತ್ತಿದೆ.ಕೆಡಿಪಿ ಸಭೆಯೊಂದರಲ್ಲಿ ಅವರು ತಾಲೂಕು ವೈದ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಇನ್ನು ಮುಂದೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಸೇವೆ ಒದಗಿಸಲು ಸೂಚಿಸಿದ್ದರು ಎನ್ನುವ ಮಾಹಿತಿಗಳಿದ್ದು ಅವರ ಮಾತಿಗೂ ಸೊಪ್ಪು ಹಾಕದೆಯೇ ಆಡಳಿತ ಮಂಡಳಿ ಎಂದಿನ ತಮ್ಮ ನಿರ್ಲಕ್ಷ್ಯ ದೋರಣೆಯನ್ನು ಮುಂದುವರೆಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

× How can I help you?