ಕೆ.ಆರ್.ಪೇಟೆ:ಕಲುಷಿತ ನೀರು ಸೇವಿಸಿ ಇಬ್ಬರು ವಯೋ ವೃದ್ಧರು ಮೃತಪಟ್ಟಿ, 4 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಜಿಲ್ಲಾ ಮತ್ತು ತಾಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ತಾಲ್ಲೂಕಿನ ಗಡಿ ಭಾಗದಲ್ಲಿರುವ ಸಂತೆಬಾಚಹಳ್ಳಿ ಹೋಬಳಿಯ ಭಾರತಿಪುರ ಕ್ರಾಸ್ ಪಂಚಾಯತಿ ವ್ಯಾಪ್ತಿಯಲ್ಲಿರುವ ಮಾರೇನಹಳ್ಳಿ ಗ್ರಾಮದಲ್ಲಿ ಘಟನೆ ಈ ದುರ್ಘಟನೆ ಜರುಗಿದೆ.
ಘಟನೆ ಕುರಿತು ಮಾತನಾಡಿದ ಮಾಹಿತಿ ನೀಡಿದ ಗ್ರಾಮದ ಮುಖಂಡ ಯೋಗೇಶ್ ಅವರು ಎಂದಿನಂತೆ ಕಳೆದ ನಾಲ್ಕು ದಿನಗಳ ಹಿಂದೆ ಗ್ರಾಮ ಜನರು ಗ್ರಾಮದಲ್ಲಿರುವ ಕೊಳವೆಬಾವಿ ಹಾಗೂ ಪಂಚಾಯತಿಯಿಂದ ಬಿಡುವ ನೀರು ಸೇವಿಸಿದಾರೆ.ಆದರೆ ಕೊಳವೆ ಬಾವಿ ನೀರು ಸೇವಿಸಿದ ಜನರು ಆರೋಗ್ಯಕರವಾಗಿದ್ದಾರೆ.ಪಂಚಾಯಿತಿಯಿಂದ ಬಿಡುವ ನಲ್ಲಿ ನೀರು ಸೇವಿಸಿದವರು ಮಾತ್ರ ತೀವ್ರ ವಾಂತಿ ಭೇದಿಯಿಂದ ಬಳಲಿದ್ದಾರೆ.
ಗ್ರಾಮದ ಹಿರಿಯ ಮಹಿಳೆ ಜವರಮ್ಮ,ಚಿಕ್ಕಮ್ಮ,ಮೃತಪಟ್ಟಿದ್ದಾರೆ.4 ಮಂದಿ ಹಾಸನ ಜಿಲ್ಲಾ ಆಸ್ಪತ್ರೆಯ ತುರ್ತು ಘಟಕ ದಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.ಉಳಿದವರು ನೆರೆಯ ತಾಲ್ಲೂಕು ಚನ್ನರಾಯಪಟ್ಟಣ ಹಾಗೂ ಶ್ರವಣಬೆಳಗೊಳ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಘಟನೆ ಜರುಗಿ ನಾಲ್ಕು ದಿನಗಳು ಕಳೆದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೆ ಕಾಟಚಾರಕ್ಕೆ ಗ್ರಾಮಕ್ಕೆ ಆಗಮಿಸಿ ತೆರಳುತ್ತಿದ್ದಾರೆ.ಜಿಲ್ಲಾ ಮತ್ತು ತಾಲೂಕು ಆಡಳಿತ,ಸಂಬಂಧಪಟ್ಟ ಇಲಾಖೆ ಕೂಡ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿ ಸೂಕ್ತ ಕ್ರಮಕ್ಕೆ ಅಗ್ರಹಿಸಿದರು.
——————–ಮನು ಮಾಕವಳ್ಳಿ ಕೆ ಆರ್ ಪೇಟೆ