ಗೋಣೀಬೀಡು ಭಾಗದಲ್ಲಿ ಹುಲಿ ಪ್ರತ್ಯಕ್ಷ,ಭಯಭೀತರಾದ ಗ್ರಾಮಸ್ಥರು.!!!

ಮೂಡಿಗೆರೆ:ತಾಲೂಕಿನ ಗೋಣೀಬಿಡು ಸಮೀಪದ ಕೆಲ ಗ್ರಾಮಗಳಲ್ಲಿ ಹುಲಿಯೊಂದು ಕಾಣಿಸಿಕೊಂಡಿದ್ದು ೪ ಹಸುಗಳ ಮೇಲೆರೆಗಿ ಪರಚಿ ಗಾಯಗೊಳಿಸಿದೆ.ಹುಲಿ ಲಗ್ಗೆಯಿಟ್ಟರಿವುದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ದೇವನಾರಿ ಕಾಫಿ ಎಸ್ಟೇಟ್,ಕಲ್ಲುಗುಡ್ಡ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ೪ ದಿನದಿಂದ ಹುಲಿ ಸಂಚಾರ ಕಂಡುಬoದಿದೆ.ಶನಿವಾರ ರಾತ್ರಿ ಕಾರ್ಬೈಲ್ ಮತ್ತು
ನಂದೀಪುರ ಗ್ರಾಮದತ್ತ ತೆರಳಿದೆ.ಹುಲಿ ಸಂಚರಿಸುತ್ತಿರುವ ವ್ಯಾಪ್ತಿಯನ್ನು ಗುರುತಿಸಲು ಅಲ್ಲಲ್ಲಿ ಕ್ಯಾಮರಾ ಆಳವಡಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹುಲಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ತೋಟಗಳಿಗೆ ಕಾರ್ಮಿಕರು ಕೆಲಸಕ್ಕೆ ಹಾಗೂ ವಿಧ್ಯಾರ್ಥಿಗಳು ಶಾಲಾಕಾಲೇಜಿಗೆ ತೆರಳುತ್ತಿಲ್ಲ.ವಾಹನ ಸವಾರರು ಎಚ್ಚರಿಕೆಯಿಂದ ಇರುವಂತೆ
ಅರಣ್ಯ ಇಲಾಖೆ ಸಿಬ್ಬಂದಿಗಳು ದ್ವನಿವರ್ಧಕದಲ್ಲಿ ಪ್ರಚಾರ ನಡೆಸಲಾಗಿದೆ.

ಕಳೆದ ತಿಂಗಳು ಗೋಣೀಬೀಡು, ಜಿಹೊಸಹಳ್ಳಿ ಕಸ್ಕೆಬೈಲ್,ಆನೆದಿಬ್ಬ,ಕಲ್ಲುಗುಡ್ಡ,ಮಾಕೋನಹಳ್ಳಿ ಮುಂತಾದ ಗ್ರಾಮದಲ್ಲಿ ೧೯ ಕಾಡಾನೆಗಳು ಹಿಂಡುಹಿoಡಾಗಿ ಸಂಚರಿಸಿ ಅಪಾರ ಪ್ರಮಾಣದ ಬೆಳೆಗಳನ್ನು ನಾಶಪಡಿಸಿದ್ದವು.ಇದರ ಬೆನ್ನಲ್ಲೇ ಈಗ ಹುಲಿ ಪ್ರತ್ಯಕ್ಷವಾಗಿದ್ದು ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ.ಅರಣ್ಯ ಇಲಾಖೆ ಅಧಿಕಾರಿಗಳು ಹುಲಿಯನ್ನು ಹಿಡಿದು ಸಾಗಿಸಬೇಕು ಎಂದು
ಗೋಣೀಬೀಡು ಗ್ರಾ.ಪಂ.ಸದಸ್ಯೆ ಜುಬೇದ ಒತ್ತಾಯಿಸಿದ್ದಾರೆ.

ಕಲ್ಲುಗುಡ್ಡ ಗ್ರಾಮ ದೇವನಾರಿ ಎಸ್ಟೇಟ್ ಪರಿಸರದಲ್ಲಿ ಹುಲಿಯೊಂದು ತಿರುಗಾಡಿದ ಬಗ್‌ಗೆ ಮಾಹಿತಿ ಸಿಕ್ಕಿದೆ. ೬ಕರುಗಳನ್ನು ಪರಚಿ ಗಾಯಗೊಳಿಸಿದೆ. ಹುಲಿ ತಿರುಗಾಡಿದ
ಸ್ಥಳದಲ್ಲಿ ತೀವ್ರ ಕಾರ್ಯಾಚರಣೆ ನಡೆಸಲಾಗಿದೆ.ಎಲ್ಲ ಗ್ರಾಮಗಳಲ್ಲಿಯೂ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.ಹುಲಿಯ ಸಂಚಾರ ಕ್ಯಾಮರಾದಲ್ಲಿ ಸೆರೆಹಿಡಿಯಲು
ಪ್ರಯತ್ನಿಸಲಾಗಿದೆ.ಹುಲಿ ಬೇರೆ ಜಿಲ್ಲೆಯಿಂದ ಅರಣ್ಯದ ಮೂಲಕ ಪ್ರವೇಶಿಸಿರಬಹುದೆಂಬ ಸಂಶಯವಿದೆ.ಬoದ ದಾರಿಯಲ್ಲೇ ಮರಳಿ ವಾಪಾಸ್ಸಾಗಬಹುದು ಎಂದು ಅಂದಾಜಿಸಲಾಗಿದೆ. ಸಾರ್ವಜನಿಕರು ಎಚ್ಚರಿಕೆಯಿಂದಿರಲು ಪ್ರಚಾರ ನಡೆಸಲಾಗಿದೆ.

  -ಚರಣ್, ಆರ್‌ಎಫ್‌ಒ,

ಮೂಡಿಗೆರೆ ವಲಯ

Leave a Reply

Your email address will not be published. Required fields are marked *

× How can I help you?