ಜನ್ನಾಪುರ-ವಿದ್ಯುತ್ ಸಮಸ್ಯೆ ಪರಿಹರಿಸುವಂತೆ ಸಾರ್ವಜನಿಕರಿಂದ ಮೆಸ್ಕಾಂಕಛೇರಿ ಎದುರು ಪ್ರತಿಭಟನೆ.

ಮೂಡಿಗೆರೆ:ಗೋಣಿಬೀಡು ಹೋಬಳಿಯಲ್ಲಿ ನಿರಂತರವಾಗಿ ಉoಟಾಗುತ್ತಿರುವ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಿಕೊಡುವಂತೆ ಒತ್ತಾಯಿಸಿ ಜನ್ನಾಪುರ ಮೆಸ್ಕಾಂ ಕಛೇರಿಯ ಎದುರು ಶನಿವಾರ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ಮಳೆಗಾಲದ ಆದಿಯಲ್ಲಿ ವಿದ್ಯುತ್ ಸಮಸ್ಯೆ ಉಂಟಾದಾಗ ಸಾರ್ವಜನಿಕರು ಅಧಿಕಾರಗಳ ಗಮನ ಸೆಳೆಯಲು ಪ್ರತಿಭಟನೆ ನಡೆಸಿದ ವೇಳೆ ಸ್ಥಳಕ್ಕೆ ಆಗಮಿಸಿದ್ದ ಮೆಸ್ಕಾಂ ಆಧಿಕಾರಿಗಳು
ವಿದ್ಯುತ್ ಸಮಸ್ಯೆ ಬಗೆಹರಿಸಲು ಒಂದು ತಿಂಗಳ ಸಮಯಾವಕಾಶ ಕೇಳಿದ್ದರು.ಅದು ನಡೆದು ಒಂದೂವರೆ ತಿಂಗಳು ಕಳೆದರೂ ಸಮಸ್ಯೆ ಪರಿಹರಿಸಲು ಮೆಸ್ಕಾಂ ಅಧಿಕಾರಿಗಳು ಮುಂದಾಗಿಲ್ಲ ಎಂದು ಆರೋಪಿಸಿ ಈಗ ಮತ್ತೆ ಪ್ರತಿಭಟನೆ ನಡೆಸಿದರು.

ಗೋಣೀಬೀಡು, ಜನ್ನಾಪುರ, ಹಂತೂರು, ಊರುಬಗೆ,ಬೈರಾಪುರ, ದೇವರುಂದ, ಬೆಟ್ಟದಮನೆ, ಕನ್ನೇಹಳ್ಳಿ, ಉಗ್ಗೇಹಳ್ಳಿ,ಉದುಸೆ ಕಮ್ಮರಗೋಡು, ನಿಡಗೋಡು,ಅಣಜೂರು,ಚಂದ್ರಾಪುರ, ಹೊಯ್ಸಳಲು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರಾತ್ರಿ ಹಗಲೆನ್ನದೆ ನಿರಂತರವಾಗಿ ವಿದ್ಯುತ್
ಕಡಿತಗೊಳ್ಳುತ್ತಿದೆ. ದಿನದಲ್ಲಿ ಒಂದೆರಡು ಗಂಟೆಯೂ ವಿದ್ಯುತ್,ಪೂರೈಕೆ ಇರುವುದಿಲ್ಲ.

ಇದರಿಂದ ಕುಡಿಯುವ ನೀರಿಗೆ ತೀವೃ ತೊಂದರೆ ಉಂಟಾಗುತ್ತಿದೆ.ಮೆಸ್ಕಾo ಅಧಿಕಾರಿಗಳಿಗೆ ತಿಳಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.ವಿಧ್ಯುತ್ ಸಮಸ್ಯೆಯಿಂದಾಗಿ ಜನ್ನಾಪುರ ಮತ್ತು ಗೋಣೀಬೀಡಿನಲ್ಲಿರುವ ವಿವಿಧ ಇಲಾಖೆಗಳಾದ ನಾಡಕಛೇರಿ, ನೆಮ್ಮದಿ ಕೇಂದ್ರ, ಗ್ರಾಮ್ ಒನ್, ಆರೋಗ್ಯ ಕೇಂದ್ರ, ಅoಚೆ ಕಛೇರಿ, ಬ್ಯಾಂಕ್, ನ್ಯಾಯಬೆಲೆ ಅಂಗಡಿ, ಪೋಲೀಸ್ ಠಾಣೆ, ಸೊಸೈಟಿ ಮತ್ತಿತರೆ ಕಛೇರಿಗಳಲ್ಲಿ ಯಾವುದೇ ಸೇವೆ ಲಭ್ಯವಾಗದೇ ನಾಗರಿಕರು ಪರದಾಡುವಂತಾಗಿದೆ. ಅಲ್ಲದೆ ವಿದ್ಯುತ್ ಅಡಚಣೆಯಿಂದಾಗಿ ಮೊಬೈಲ್ ಟವರ್ ಕೂಡಾ ಕೆಲಸ ನಿಲ್ಲಿಸುವುದರಿಂದ ಸಾರ್ವಜನಿಕರ ಮೊಬೈಲ್ ಸಂಪರ್ಕಕ್ಕೂ ಅಡ್ಡಿಯಾಗುತ್ತಿದೆ.ಇಂಧನ ಸಚಿವ
ಕೆ.ಜೆ.ಜಾರ್ಜ್ ಅವರು ಉಸ್ತುವಾರಿ ವಹಿಸಿಕೊಂಡಿರುವ ಜೆಲ್ಲೆಯ ಪರಿಸ್ತಿತಿಯೇ ಹೀಗಾದರೆ ಉಳಿದ ಕಡೆಗಳ ಪರಿಸ್ತಿತಿ ಹೇಗಿರುತ್ತದೆ ಎಂದು ಪ್ರತಿಭಟನಾಕಾರರು ಅಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಬೇಟಿ ನೀಡಿದ ಗೋಣೀಬೀಡು ಮೆಸ್ಕಾಂ ಜೂನಿಯರ್,ಇಂಜಿನಿಯರ್ ರವಿಕುಮಾರ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ಮಳೆಗಾಲವಾದ್ದರಿಂದ ಅಲ್ಲಲ್ಲಿ ಅಗಾಗ ವಿದ್ಯುತ್ ಕಂಬ ಮತ್ತು ತಂತಿಗಳ ಮೇಲೆ ಮರಗಳು ಬೀಳುವುದರಿಂದ ಕಂಬ ಮತ್ತು ತಂತಿಗಳು ತುಂಡಾಗುತ್ತಿದೆ.ಅದರ ದುರಸ್ತಿ ಕಾರ್ಯ ತ್ವರಿತಗತಿಯಲ್ಲಿ ನಡೆಸುತ್ತಿದ್ದೇವೆ.ಇನ್ನೊಂದು ತಿಂಗಳಿನಲ್ಲಿ ಎಲ್ಲವೂ ಸರಿಯಾಗಲಿದೆ.ತೊಂದರೆ ನಿಮಗೂ ತಿಳಿದಿದ್ದು ಸಾರ್ವಜನೀಕರು
ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಆಗ ಪ್ರತಿಭಟನೆಕಾರರು ಇನ್ನೊಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸದಿದ್ದಲ್ಲಿ ತಾಲೂಕು ಕಛೇರಿ ಎದುರು ಪ್ರತಿಭಟನೆ
ನಡೆಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಮಹೇಶ್ ಸಾಲುಮರ,ನಯನ, ರಾಮ್ ಪ್ರಸಾದ್,ವಿನಯ್, ಗಿರೀಶ್,ರಘು, ನಂದನ್, ಪ್ರಹ್ಲಾದ,ಮೋಹನ್, ಜಗದೀಶ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *

× How can I help you?