ಬಣಕಲ್; ಪ್ರತಿ ಸೋಮವಾರ ಸಂತೆ ದಿನ ಉಂಟಾಗುತ್ತಿರುವ ಟ್ರಾಫಿಕ್ ಸಮಸ್ಯೆಯಿಂದ ನಾಗರಿಕರು ಬೇಸತ್ತು ಹೋಗಿದ್ದಾರೆ.ಮೊದಲೇ ಸಂತೆ ರಸ್ತೆ ಇಕ್ಕಟ್ಟಾಗಿವೆ.ಅಂಥದ್ದರಲ್ಲಿ ದೊಡ್ಡ ವಾಹನಗಳು ಚಲಿಸಿದರೆ ತೊಂದರೆಯಾಗುತ್ತದೆ ದಯವಿಟ್ಟು ಒಂದು ದಿನ ದೊಡ್ಡ ವಾಹನಗಳನ್ನು ನಿರ್ಬಂಧಿಸಿ ಕೆಂಬಲ್ ಮಠ ರಸ್ತೆ ಮೂಲಕ ಸಾಗುವಂತೆ ವ್ಯವಸ್ಥೆ ಮಾಡಬೇಕು ಹಾಗೆ ಸಂತೆ ನಡೆಯುವ ಸ್ಥಳದಲ್ಲಿ ಹೋಂ ಗಾರ್ಡ್ ಗಳನ್ನು ನಿಯೋಜಿಸಬೇಕು ಎಂದು ಸಾವರ್ಕರ್ ಯುವ ಪ್ರತಿಷ್ಠಾನ ಅಧ್ಯಕ್ಷ ವಿನಯ್ ಶೆಟ್ಟಿ ಮನವಿ ಮಾಡಿದ್ದಾರೆ.
ಸಂತೆಗೆ ಮಹಿಳೆಯರು ವಯೋವೃದ್ಧರು ಬರಲೇಬಾರದು ಎನ್ನುವಷ್ಟು ಟ್ರಾಫಿಕ್ ದಟ್ಟಣೆ ಹೆಚ್ಚಾಗಿರುತ್ತದೆ.ಸಂಚಾರದ ದಟ್ಟಣೆಯಲ್ಲಿ ಪಾದಚಾರಿಗಳಿಗೆ ಒಂದೊಂದು ಹೆಜ್ಜೆಯೂ ಭಾರವೆನಿಸುತ್ತದೆ.ಈ ಜಾಗಗಳಲ್ಲಿ ದ್ವಿಚಕ್ರ ವಾಹನಗಳನ್ನು ಸವಾರರು ಸಿಕ್ಕ ಸ್ಥಳದಲ್ಲಿ ನಿಲ್ಲಿಸಿ ಸಂತೆ ಸಾಮಗ್ರಿ ಖರೀದಿಗೆ ಹೋಗುತ್ತಾರೆ ಇದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ ಎಂದರು.
ಸಂತೆ ಬಿಟ್ಟು ರಸ್ತೆ ಬದಿಯಲ್ಲಿಹಾಕುವ ಅಂಗಡಿಗಳನ್ನು ತೆರವು ಮಾಡಿ ಸಂತೆಗೆ ಸ್ಥಳಾಂತರಿಸಬೇಕು ಎಂದು ಪೊಲೀಸ್ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗೆ ಯುವ ಸಾವರ್ಕರ್ ಪ್ರತಿಷ್ಟಾನದ ಸದಸ್ಯರು ಮನವಿ ಪತ್ರ ನೀಡಿದರು.
—————–ಸೂರಿ ಬಣಕಲ್