ಮೂಡಿಗೆರೆ:ಪೋಲಿಸರ ಮೇಲೆ ಜನರು ತಪ್ಪು ಭಾವನೆ ಹೊಂದಬಾರದು,ಅನ್ಯಾಯಕ್ಕೊಳಗಾದವರಿಗೆ ನ್ಯಾಯ
ಒದಗಿಸಿಕೊಡುವುದು ಪೋಲಿಸರ ಕರ್ತವ್ಯವಾಗಿದೆಯೇ ಹೊರತು ಜನರ ಮೇಲೆ ದರ್ಪ ತೋರುವುದಲ್ಲ ಎಂದು ಮೂಡಿಗೆರೆ ಪೋಲಿಸ್ ಠಾಣೆಯ ತನಿಖಾ ಪಿಎಸ್ಐ ಚಂದ್ರಶೇಖರ್ ತಿಳಿಸಿದರು.
ಅವರು ಮಂಗಳವಾರ ದ ಹಂಗರ್ ಪ್ರಾಜೆಕ್ಟ್ ಮತ್ತು ಸುಗ್ರಾಮ ಗ್ರಾ.ಪಂ.ಚುನಾಯಿತ ಮಹಿಳಾ ಪ್ರತಿನಿಧಿಗಳ
ಒಕ್ಕೂಟದಿಂದ ಪಟ್ಟಣದ ಲ್ಯಾಂಪ್ಸ್ ಸಹಕಾರ ಸಂಘದ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿ, ಮಹಿಳೆಯರ ಮೇಲೆ ಹಿಂಸೆ,ದೌರ್ಜನ್ಯ,ಅತ್ಯಾಚಾರ,ಕೊಲೆಯಂತಹ ಗoಭೀರವಾದ ಅಪರಾಧ ಕೃತ್ಯಗಳು ನಡೆದಾಗ ಇಂತಹ ಅಪರಾಧಗಳನ್ನು ತಡೆಗಟ್ಟಲು ಚುನಾಯಿತ ಪ್ರತಿನಿಧಿಗಳು ಪೋಲೀಸರೊಂದಿಗೆ ಸಹಕರಿಸಬೇಕು.
ತುರ್ತು ಸಂಧರ್ಭದಲ್ಲಿ ೧೧೨ ಸಂಖ್ಯೆಗೆ ಕರೆ ಮಾಡಿದರೆ ಅದೇ ಕ್ಷಣದಲ್ಲಿ ಕೃತ್ಯ ನಡೆದ ಸ್ಥಳಕ್ಕೆ ಪೋಲೀಸರು ಬರಲಿದ್ದಾರೆ. ಬಾಲಕಿಯರ ಮೇಲೆ ದೌರ್ಜನ್ಯ ನಡೆದಾಗ ಅಪರಾಧಿಗೆ ಫೋಕ್ಸೋ ಕಾಯ್ದೆ ಅಡಿಯಲ್ಲಿ ಗಂಭೀರ ಶಿಕ್ಷೆಗೆ
ಒಳಪಡಿಸಲಾಗುತ್ತದೆ ಸಾರ್ವಜನಿಕ ವಲಯದಲ್ಲಿ ಈ ರೀತಿಯ ದೌರ್ಜನ್ಯ ಕಂಡುಬoದಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಪೋಲೀಸರಿಗೆ ದೂರು ನೀಡಬಹದು.ಮತ್ತು ಮಾಹಿತಿದಾರರ ಹೆಸರು ಗೌಪ್ಯವಾಗಿಡಲಾಗುತ್ತದೆ. ಚುನಾಯಿತ ಮಹಿಳಾ ಪ್ರತಿನಿಧಿಗಳು ಮತ್ತು ಮಹಿಳಾ ಸಂಘಸoಸ್ಥೆಯವರು ಕಾನೂನಿನ ಬಗ್ಗೆ ಸಾರ್ವಜನಿಕವಾಗಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.ಅಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆದಲ್ಲಿ ಮಹಿಳೆಯರು ಜಾಗೃತರಾಗಿ ಅಪರಾಧಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾಫಿನಾಡು ಸಮಾಜಸೇವಕ ಸೇವಾ ಸಂಘದ ಅಧ್ಯಕ್ಷ ಹಸೈನಾರ್ ಮಾತನಾಡಿ ಯಾವುದೇ ರೀತಿಯ ಅಪಘಾತ, ಅನಾಹುತ, ಪ್ರಕೃತಿ ವಿಕೋಪದಿಂದ ಸಾರ್ವಜನಿಕರು ತೊಂದರೆಗೊಳಗಾದಾಗ ನಮ್ಮ ಸಂಘಟನೆಯನ್ನು ಸಂಪರ್ಕಿಸಿದಲ್ಲಿ ದಿನದ ೨೪ ಗಂಟೆಯೂ ಉಚಿತ ಸೇವೆಗೆ ನಾವು ಸಜ್ಜಾಗಿದ್ದೇವೆ.ಕಾನೂನಾತ್ಮಕ ಸಲಹೆ,ಮಹಿಳೆಯರ ರಕ್ಷಣೆ,ಪೋಲೀಸರ ಸಹಾಯ,ಮಧ್ಯಪಾನ ಮತ್ತು ಅಮಲು ಪದಾರ್ಧಗಳ ವ್ಯಸನಿಗಳಿಂದ ಸಾರ್ವಜನಿಕರಿಗಾಗುವ ತೊಂದರೆ,ಬಾಲ್ಯವಿವಾಹ ತಡೆ, ಹೀಗೆ ಯಾವುದೇ ಸಮಾಜಘಾತುಕ ತೊಂದರೆಯುoಟಾದಲ್ಲಿ ನಮ್ಮ ಸಂಘಟನೆಯನ್ನು ಸಂಪರ್ಕಿಸಿದಲ್ಲಿ ಸ್ಥಳೀಯ ಪೋಲೀಸರ ಸಹಕಾರದೊಂದಿಗೆ ಸೂಕ್ತ ರಕ್ಷಣೆ ಒದಗಿಸುವ ವ್ಯವಸ್ತೆ ಮಾಡಲಾಗುವುದು.ಇದಲ್ಲದೆ ಅನಾಥರು, ನಿರ್ಗತಿಕರು, ಮಾನಸಿಕ ಅಸ್ವಸ್ತರ ಬಗ್ಗೆ ಮಾಹಿತಿ ನೀಡಿದಲ್ಲಿ ಅವರನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಲಾಗುವುದು. ವಾರಸುದಾರರಿಲ್ಲದ ಮೃತದೇಹಗಳನ್ನು ಅವರವರ ಧರ್ಮದ ಸಂಪ್ರದಾಯದAತೆ ಅoತ್ಯಕ್ರಿಯೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ರಾಜ್ಯಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವಂತೆ ಪಿಎಸ್ಐ ಚಂದ್ರಶೇಖರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಪಿಎಸ್ಐ ಚಂದ್ರಶೇಖರ್ ಮತ್ತು ಸಮಾಜಸೇವಕ ಹಸೈನಾರ್ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಸುಗ್ರಾಮ ಸಂಸ್ಥೆಯ ತಾಲೂಕು ಸಂಯೋಜಕ ನವೀನ್ ಕುಮಾರ್, ದೀಕ್ಷಿತ್, ಮಹಿಳಾ ಚುನಾಯಿತ ಪ್ರತಿನಿಧಿ ಸಂಘದ ತಾಲೂಕು ಅಧ್ಯಕ್ಷೆ ರಾಧಾ ಮಿತ್ರೇಶ್, ಮತ್ತು ತಾಲೂಕಿನ ವಿವಿಧ ಗ್ರಾ.ಪಂ.ಮಹಿಳಾ ಚುನಾಯಿತ ಪ್ರತಿನಿಧಿಗಳಾದ ಕೆ.ಪಿ.ಭಾರತಿ, ಡಿ.ರಂಜಿತಾ, ಅಂಬಿಕಾ, ಸೋನಿಯಾ, ಸುಮಿತ್ರಾ, ಜ್ಯೋತಿ ಸಾಲ್ದಾನ,
ಜುಬೇದ, ನಜ್ಮಾ, ಪೂರ್ಣಿಮಾ ರವಿ, ಸುಪ್ರೀತಾ ನಯನ, ಗೀತಾ, ಚಂದ್ರಿಕಾ ಸುಪ್ರೀತಾ ಸ್ವಾತಿಶ್ರೀ ಮತ್ತಿತರರಿದ್ದರು.
ವರದಿ: ವಿಜಯಕುಮಾರ್,ಮೂಡಿಗೆರೆ