ಮೂಡಿಗೆರೆ:ಮೂಡಿಗೆರೆ ಪ.ಪಂ.ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನ ಆಯ್ಕೆಯಾದ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಮಾತಿನ ಭರಾಟೆಯಲ್ಲಿ ತಾನು ಯಾವ ಅಭಿವೃದ್ಧಿ ಕೆಲಸ ಮಾಡಿಲ್ಲವೆಂದು ಅವರೇ ಒಪ್ಪಿಕೊಂಡಿದ್ದಾರೆoದು ಬಿಜೆಪಿ ತಾಲೂಕು ವಕ್ತಾರ ಹಳೆಕೋಟೆ ವಿನಯ್ ಕುಟುಕಿದ್ದಾರೆ.
ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿ,ಕಳೆದ ಪ.ಪಂ. ಚುನಾವಣೆಯಲ್ಲಿ ಜನರು ಬಿಜೆಪಿಗೆ ಸ್ಪಷ್ಟ ಬಹುಮತ ನೀಡುವ ಮೂಲಕ ೫ ವರ್ಷ ಆಡಳಿತ ನಡೆಸಲು ಅಧಿಕಾರ ನೀಡಿದ್ದರು.ಅದರಂತೆ ಮೊದಲ ಅವದಿಯಲ್ಲಿ ಎರಡೂವರೆ ವರ್ಷ ಬಿಜೆಪಿ ಆಡಳಿತ ನಡೆಸಿದೆ.ಆಗ ಎಂ.ಪಿ.ಕುಮಾರಸ್ವಾಮಿ ಅವರು ಬಿಜೆಪಿ ಶಾಸಕರಾಗಿದ್ದರು.ಇದನ್ನು ಅವರು
ಮರೆತು ಮಂಗಳವಾರ ಪ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್,ಪಕ್ಷದ ಅಭ್ಯರ್ಥಿಗಳು ಆಯ್ಕೆಯಾದ ಸಂದರ್ಭದಲ್ಲಿ ಬಿಜೆಪಿ ಯಾವ ಅಭಿವೃದ್ಧಿ ಕೆಲಸ ಮಾಡಿಲ್ಲವೆಂದು ಹೇಳಿದ್ದಾರೆ.ಅವರು ಶಾಸಕರಾದಾಗ ಯಾವ ಅಭಿವೃದ್ಧಿ ಕೆಲಸವೂ ಆಗಿಲ್ಲವೆಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆoದು ತಿಳಿಸಿದ್ದಾರೆ.
ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಪಟ್ಟಣದ ರಸ್ತೆ ಅಭಿವೃದ್ಧಿಗೊಳ್ಳಲಿಲ್ಲ.ಕುಡಿಯುವ ನೀರಿನ ತೊಂದರೆ ತಪ್ಪಲಿಲ್ಲ.ರಸ್ತೆ ಆಗಲಿಕರಣ ಮಾಡಲಿಲ್ಲ.ಸಾರ್ವಜನಿಕ ಶೌಚಾಲಯವಿಲ್ಲ.ಒಟ್ಟಿನಲ್ಲಿ ಪಟ್ಟಣದ ಯಾವುದೇ ಅಭಿವೃದ್ದಿಯೂ ನಡೆದಿಲ್ಲ. ಹಾಗಾಗಿ ಬಿಜೆಪಿ ಕಿತ್ತೊಗೆದು ಕಾಂಗ್ರೆಸ್ ಆಡಳಿತಕ್ಕೆ ತರಲಾಗಿದೆ ಎಂದು ಅವರು ಆರೋಪಿಸಿದ್ದು,ಅವರು
ಶಾಕರಾಗಿದ್ದಾಗ ಪಟ್ಟಣಕ್ಕೆ ಮಾಡಿದ ಅಭಿವೃದ್ದಿ ಕೆಲಸಗಳನ್ನು ಬಹಿರಂಗವಾಗಿ ಹೇಳಿರುವುದು ಹಾಸ್ಯಾಸ್ಪದವಾಗಿದೆ.ಬುಧವಾರ ನಡೆದ ೨ನೇ ಅವಧಿಯ ಪ.ಪಂ.ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಿತ್ತು. ಬಿಜೆಪಿ ಎಲ್ಲಾ ಸದಸ್ಯರಿಗೆ ವಿಪ್ ಜಾರಿ ಮಾಡಿದ್ದರೂ ಬಿಜೆಪಿಯ ಓರ್ವ ಸದಸ್ಯ ವಿಪ್ ಉಲ್ಲಂಘಿಸಿ ಕಾಂಗ್ರೆಸ್ಸಿಗೆ ಮತ ಹಾಕಿದ್ದರಿಂದ ಅಧಿಕಾರ ಕೈ ತಪ್ಪಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ವರದಿ: ವಿಜಯಕುಮಾರ್, ಮೂಡಿಗೆರೆ.