ಮೂಡಿಗೆರೆ:ತಾಲೂಕಿನ ಸತ್ತಿಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಿಲ್ಲದೆ ಪಾಠಪ್ರವಚನಗಳು ನಡೆಯುತ್ತಿಲ್ಲ.ಕೂಡಲೇ ಶಾಲೆಗೆ ಶಿಕ್ಷಕರನ್ನು ನೇಮಿಸಿ ವಿಧ್ಯಾರ್ಥಿಗಳ ಕಲಿಕೆಗೆ ಸಹಕರಿಸಿ ಎಂದು ಆಗ್ರಹಿಸಿ ಎಸ್ ಡಿ ಎಂ ಸಿ ಸದಸ್ಯರು,ಪೋಷಕರು ಮತ್ತು ಗ್ರಾಮಸ್ಥರು ಶುಕ್ರವಾರ ಶಾಲೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಎಸ್ ಡಿ ಎಂ ಸಿ ಅಧ್ಯಕ್ಷ ಜಯಂತ್ ಮಾತನಾಡಿ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ಪಾಠಗಳು
ನಡೆಯುತ್ತಿಲ್ಲ. ಹಿರಿಯ ಪ್ರಾಥಮಿಕ ಶಾಲೆಯಾದ ಇಲ್ಲಿ ಕೇವಲ 16 ವಿಧ್ಯಾರ್ಥಿಗಳು ಮಾತ್ರ ಇದ್ದಾರೆ.ಕಲಿಕೆಗೆ ಶಿಕ್ಷಕರಿಲ್ಲದ ಕಾರಣ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ.ಈಗ ಓರ್ವ ಅತಿಥಿ ಶಿಕ್ಷಕರು ಮಾತ್ರ ಇದ್ದಾರೆ.ಮಿಕ್ಕ ಶಿಕ್ಷಕರೆಲ್ಲರೂ ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದಾರೆ.ಹೀಗೆ ಮುಂದುವರಿದಲ್ಲಿ ಮುಂದಿನ ವರ್ಷ ಮಕ್ಕಳಿಲ್ಲದೆ ಶಾಲೆ ಮುಚ್ಚುವ ಹಂತ ತಲುಪುವುದು ನಿಸ್ಸಂಶಯ.ಶಿಕ್ಷಕರಿಲ್ಲದ ಕಾರಣ ಈ ಶೈಕ್ಷಣಿಕ ವರ್ಷದ ಆದಿಯಲ್ಲಿ ಪೋಷಕರು ಟಿ.ಸಿ.ಪಡೆದು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿದ್ದಾರೆ.ಈ ಹಿಂದೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕಿ ಮಾಲತಿ
ಎಂಬುವವರನ್ನು ಕಡೂರು ತಾಲೂಕಿನ ಶಾಲೆಯೊಂದಕ್ಕೆ ನಿಯೋಜನೆ ಮೇಲೆ ಕಳುಹಿಸಿದ್ದಾರೆ.ಅವರ ನಿಯೋಜನೆ ರದ್ದುಪಡಿಸಿ ಪುನ: ಇಲ್ಲಿಗೆ ಅವರನ್ನು ವರ್ಗಾವಣೆಗೊಳಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮೀಣ ಪ್ರದೇಶವಾಗಿರುವುದರಿಂದ ಇಲ್ಲಿನ ವಿಧ್ಯಾರ್ಥಿಗಳು ದೂರದ ಶಾಲೆಗೆ ಹೋಗಲು ಸಮಯಕ್ಕೆ ಸರಿಯಾಗಿ ಬಸ್ಸಿನ ವ್ಯವಸ್ಥೆಯಿಲ್ಲ.ಪೋಷಕರು ತಮ್ಮ ಮಕ್ಕಳನ್ನು ಸಂಭoದಿಕರ ಮನೆಯಲ್ಲಿರಿಸಿ ಶಿಕ್ಷಣ ಕೊಡಿಸುತ್ತಿದ್ದಾರೆ.ಸರ್ಕಾರಿ ಶಾಲೆಯ ಉಳಿವಿಗೆ ಇನ್ನಿಲ್ಲದ ಕಸರತ್ತು ಮಾಡುತ್ತಿರುವ ಸರ್ಕಾರ ಇರುವ ಶಾಲೆಗಳಿಗೆ ಸರಿಯಾಗಿ ಶಿಕ್ಷಕರನ್ನು ನೇಮಿಸಬೇಕು.ಶಾಲೆಗೆ ಕಟ್ಟಡವಿದ್ದರೆ ಸಾಲದು.ಮಕ್ಕಳ ವಿಧ್ಯಾಭ್ಯಾಸಕ್ಕೆ ಪೂರಕವಾಗಿರಬೇಕು.ಶಾಲೆಗೆ ಸಾಕಷ್ಟು ಶಿಕ್ಷಕರನ್ನು ನೇಮಿಸಿದಲ್ಲಿ ಗ್ರಾಮೀಣ ಮಕ್ಕಳ ವಿಧ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ.ಅದಿಕಾರಿಗಳು ಈ ನಿಟ್ಟಿನಲ್ಲಿ ಜಾಗೃತರಾಗಬೇಕು.ಇಲ್ಲಿಯೇ ಶಿಕ್ಷಕರಿಲ್ಲದಿರುವಾಗ ಬೇರೆಡೆಗೆ ನಿಯೋಜನೆ ಮೇರೆಗೆ ಕಳುಹಿಸಿವುದು ಸರಿಯಲ್ಲ ಎಂದು ತಿಳಿಸಿದರು.
ಪ್ರತಿಭಟನೆ ವಿಷಯ ತಿಳಿದ ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಚಂದ್ರ ಕೂಡಲೇ ಶಾಲೆಗೆ ಬೇಟಿ ನೀಡಿ ಪೋಷಕರ ಮತ್ತು
ಎಸ ಡಿ ಎಂ ಸಿ ಸದಸ್ಯರ ಸಮಸ್ಯೆ ಆಲಿಸಿದನಂತರ ಅವರನ್ನು ಓಲೈಸಿ ಒಂದೆರಡು ದಿನದಲ್ಲಿ ಶಾಲೆಗೆ ಓರ್ವ ಶಿಕ್ಷಕರನ್ನು ನಿಯೋಜನೆ ಮಾಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.
ಪ್ರತಿಭಟನೆಯಲ್ಲಿ ಊರುಬಗೆ ಗ್ರಾ.ಪಂ. ಪಿಡಿಓ ಇಂತೇಶ್, ಸದಸ್ಯ ನಚಿಕೇತ್, ಎಸ್ಡಿಎಂಸಿ ಸದಸ್ಯರಾದ ಅರುಣ, ಜಯಕುಮಾರ್, ನಿರಂಜನ್,ಮಹೇಶ್, ಮಧುಶ್ರೀ, ಧರ್ಮೇಶ್, ಗ್ರಾಮಸ್ಥರಾದ ಪ್ರಕಾಶ್,ಜಯಪಾಲ್, ಬಸವರಾಜ್,ರಮೇಶ್, ರತನ್, ಪ್ರೇಮ್ ಕುಮಾರ್,ಶೋಧನ್ ಮತ್ತಿತರರಿದ್ದರು.
.
——————————————–ವಿಜಯಕುಮಾರ್.ಮೂಡಿಗೆರೆ