ಮೈಸೂರು-ಅತ್ಯಾಚಾರ ಆರೋಪಿಗಳನ್ನು ಗುಂ,ಡಿಟ್ಟು ಕೊ,ಲ್ಲಿ-ಡಿಪಿಕೆ ಪರಮೇಶ್ ಒತ್ತಾಯ

ಮೈಸೂರು-ಪಶ್ಚಿಮ ಬಂಗಾಳದಲ್ಲಿ ನಡೆದಿರುವ ವೈದ್ಯೆಯ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಗುಂ,ಡಿಟ್ಟು ಕೊಲ್ಲ,ಬೇಕು ಅಥವಾ ಸಾರ್ವಜನಿಕರ ಕೈಗೆ ಒಪ್ಪಿಸಿ ಅವರೇ ಶಿಕ್ಷಿಸಲು ಅವಕಾಶ ಮಾಡಿಕೊಡಬೇಕೆಂದು ಮೈಸೂರು ಹೃದಯವಂತ ಕನ್ನಡಿಗರ ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಿಪಿಕೆ ಪರಮೇಶ್ ಒತ್ತಾಯಿಸಿದ್ದಾರೆ.

ನಗರದ ಅಂಬೇಡ್ಕರ್ ಪ್ರತಿಮೆಯ ಮುಂಬಾಗದಲ್ಲಿ ಹೃದಯವಂತ ಕನ್ನಡಿಗರ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ದೇಶದಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯಗಳ ಸಂಖ್ಯೆ ಮಿತಿಮೀರಿದೆ.ಆರೋಪಿಗಳಿಗೆ ಕಾನೂನಿನ ಭಯವಿಲ್ಲದಂತಾಗಿದೆ.ದೆಹಲಿಯಲ್ಲಿ ಹಾಗು ಹೈದರಾಬಾದ್ ನಲ್ಲಿ ಇಂತಹದ್ದೇ ಘಟನೆಗಳು ನಡೆದು ಅವರ ವಿರುದ್ಧ ತೀವ್ರ ಕ್ರಮಗಳಾದರು ಸಹ ಕಾಮುಕರಲ್ಲಿ ಭಯ ಹುಟ್ಟಿಲ್ಲ.ಹಾಗಾಗಿ ಅಂತಹದ್ದೇ ಘೋರ ಘಟನೆಯೊಂದು ಕಲ್ಕತ್ತದಲ್ಲೂ ನಡೆದಿದೆ,ಆರೋಪಿಗಳನ್ನು ಬಂಧಿಸುವ ಪೊಲೀಸರು ಮುಲಾಜು ನೋಡದೆ ಅವರನ್ನು ಗುಂ,ಡಿಟ್ಟು ಕೊಲ್ಲ,ಬೇಕು ಅಥವಾ ಸಾರ್ವಜನಿಕರ ಕೈಗೆ ಒಪ್ಪಿಸಬೇಕು ಎಂದು ಅವರು ಆಗ್ರಹಿಸಿದರು.

ಮೇಣದ ಬತ್ತಿ ಹಿಡಿದು ವೈದ್ಯೆಯ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸಲಾಯಿತು.ಉಪಾಧ್ಯಕ್ಷ ರವಿ ಇವರ ಸಂಪರ್ಕ ಅಧಿಕಾರಿ ರಾಜೇಂದ್ರ, ನಿರ್ದೇಶಕ ನಂಜುಂಡ ಮುಂತಾದವರು ಹಾಜರಿದ್ದರು.

——————ಮಧುಕುಮಾರ್

Leave a Reply

Your email address will not be published. Required fields are marked *

× How can I help you?