ಮೈಸೂರು:ದೇಶದ ಪ್ರಮುಖ ವಾಹನ ನಿರ್ಮಾಣ ಸಂಸ್ಥೆ ಬಜಾಜ್ ಮೋಟರ್ಸ್ ಲಿಮಿಟೆಡ್ ಇದೀಗ ವಿಶ್ವದಲ್ಲೇ ಮೊದಲ ಸಿ ಎನ್ ಜಿ ಯಿಂದ ಚಲಿಸುವ ಬೈಕ್ ಅನ್ನು ಬಿಡುಗಡೆ ಮಾಡಿದ್ದು ಈ ಪ್ರಮುಖ ಅವಿಷ್ಕಾರವೊಂದರ ಮೂಲಕ ದೇಶದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಹಾರಿಸಿದೆ ಎಂದು ಚಿತ್ರನಟ ಶಂಕರ್ ಅಶ್ವತ್ ಸಂತಸ ವ್ಯಕ್ತಪಡಿಸಿದರು.
ಸರಸ್ವತಿಪುರಂನ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಪಾಪ್ಯುಲರ್ ಬಜಾಜ್ ಶೋರೂಮ್ ನಲ್ಲಿ ವಿಶ್ವದ ಮೊಟ್ಟ ಮೊದಲ ಬಜಾಜ್ ಸಿ ಎನ್ ಜಿ ಫ್ರೀಡಂ 125 ದ್ವಿಚಕ್ರ ವಾಹನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪೆಟ್ರೋಲ್ ಡೀಸಲ್ ಗಳ ಮೇಲೆ ಅವಲಂಬನೆ ಕಡಿಮೆ ಮಾಡಿ ವ್ಯರ್ಥವಾಗುವ ದೇಶದ ಬೊಕ್ಕಸವನ್ನು ಉಳಿಸುವ ನಿಟ್ಟಿನಲ್ಲಿ ಬಜಾಜ್ ಸಂಸ್ಥೆಯ ಈ ಬೈಕ್ ಸಹಕಾರಿಯಾಗಲಿದೆ.ಪೆಟ್ರೋಲ್ ಡೀಸೆಲ್ ಆಧಾರಿತ ವಾಹನಗಳಿಂದ ಪರಿಸರದ ಮೇಲು ತೀವ್ರ ತೆರನಾದ ಪೆಟ್ಟು ಬೀಳುತ್ತಿದ್ದು ಸಿ ಎನ್ ಜಿ ಚಾಲಿತ ವಾಹನಗಳ ಬಳಕೆಯಿಂದ ಆ ಅಪಾಯವನ್ನು ಬಹಳಷ್ಟು ಮಟ್ಟಿಗೆ ತಪ್ಪಿಸಬಹುದು ಎಂದರು.
ಕೆ ಎಂ ಪಿ ಕೆ ಟ್ರಸ್ಟ್ ನ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್ ರವರು ದೀಪ ಬೆಳಗಿಸಿ ನಂತರ ಮೊದಲ 20 ಗ್ರಾಹಕರಿಗೆ ಬೈಕ್ನ ಕೀ ಗಳನ್ನು ಕೈ ಹಸ್ತಾಂತರಿಸಿದರು.
ಶೋರೂಮ್ ನ ವ್ಯವಸ್ಥಾಪಕರಾದ ನವೀನ್ ಸಿ ಎನ್ ಜಿ ಚಾಲಿತ ಬೈಕ್ ನ ವಿಶೇಷತೆಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಸರ್ವಿಸ್ ಮ್ಯಾನೇಜರ್ ಜೋಸೆಫ್,ಹಾಗೂ ಇನ್ನಿತರ ಸಿಬ್ಬಂದಿಗಳು ಹಾಜರಿದ್ದರು.
———-ಮಧುಕುಮಾರ್