ಸಕಲೇಶಪುರ-ಹೆತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಂದ ಅಪ್ರತಿಮ ಸಾಧನೆ.

ಸಕಲೇಶಪುರ;ಹೆತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಹೆತ್ತೂರು ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ನೆಡೆದ ಹೋಬಳಿ ಮಟ್ಟದ ಶಾಲಾ ಕ್ರೀಡಾಕೂಟದಲ್ಲಿ ಅತೀ ಹೆಚ್ಚು ಪದಕಗಳ ಗೆಲ್ಲುವ ಮೂಲಕ ತಾಲೂಕು ಮಟ್ಟದಲ್ಲಿ ನಡೆಯಲಿರುವ ಶಾಲಾ ಕ್ರೀಡಾಕೂಟಕ್ಕೆ ಸ್ಪರ್ದಿಸಲು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಬಾಲಕರ ವಿಭಾಗದಲ್ಲಿ ಖೋ ಖೋ ಪ್ರಥಮ,೧೫೦೦ ಮೀಟರ್ ಓಟದಲ್ಲಿ ತೃತೀಯ,೩೦೦೦ ಮೀಟರ್ ಓಟದಲ್ಲಿ ತೃತೀಯ,800‌ ಮೀಟರ್ ಓಟದಲ್ಲಿ ತೃತೀಯ,ಶಾಟ್ ಪುಟ್ ಎಸೆತದಲ್ಲಿ ತೃತೀಯ,ಟ್ರಿಪಲ್ ಜಂಪ್ ನಲ್ಲಿ ದ್ವಿತೀಯ ಮತ್ತು ತೃತೀಯ,ಕಬಡ್ಡಿ ಯಲ್ಲಿ ದ್ವಿತೀಯ,ವಾಲಿಬಾಲ್ ನಲ್ಲಿ ದ್ವಿತೀಯ,4×400 ರಿಲೇ ಯಲ್ಲಿ ತೃತೀಯ,ಡಿಸ್ಕಸ್ ಥ್ರೋ ನಲ್ಲಿ ದ್ವಿತೀಯ ಸ್ಥಾನ ಪಡೆದು ಸಾಧನೆಗೈದಿದ್ದು,ಬಾಲಕಿಯರ ವಿಭಾಗದಲ್ಲಿ ಖೋಖೋ ಪ್ರಥಮ,3000 ಮೀಟರ್ ಓಟದಲ್ಲಿ ದ್ವಿತೀಯ,100 ಮೀಟರ್ ಓಟದಲ್ಲಿ ದ್ವಿತೀಯ,4×400 ರಿಲೇ ಓಟದಲ್ಲಿ ದ್ವಿತೀಯ,400 ಮೀ ಓಟದಲ್ಲಿ ದ್ವಿತೀಯ,200 ಮೀ ಪ್ರಥಮ,800 ಮೀ ತೃತೀಯ,ಟ್ರಿಪಲ್ ಜಂಪ್ ತೃತೀಯ,ಹೈ ಜಂಪ್ ದ್ವಿತೀಯ,ಖೋ ಖೋ ಪ್ರಥಮ ಸ್ಥಾನ ,ಜಾವಲಿನ್ ತೃತೀಯ ಸ್ಥಾನ ಪಡೆದು ಎರಡು ವಿಭಾಗಗಳಲ್ಲೂ ಸಾಧನೆಗೈದಿದ್ದಾರೆ.

ಪ್ರಾಂಶುಪಾಲರಾದ ಶಿವರಾಜ್ ವಿದ್ಯಾರ್ಥಿಗಳಿಗೆ ಹಾಗೂ ದೈಹಿಕ ಶಿಕ್ಷಕರಿಗೆ ಅಭಿನಂದಿಸಿ, ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ಶಾಲೆಗೆ ಕೀರ್ತಿ ತರುವಂತೆ ಶುಭಕೋರಿದ್ದಾರೆ.

—————–ರಕ್ಷಿತ್ ಎಸ್ ಕೆ

Leave a Reply

Your email address will not be published. Required fields are marked *

× How can I help you?